ರಾಮನಗರದಲ್ಲಿ ಮಹತ್ವದ ಹುದ್ದೆಗೆ ಆಯ್ಕೆಯಾದ ಶುಭ

ರಾಮನಗರ ಕರ್ನಾಟಕದ ಒಂದು ಜಿಲ್ಲೆ. ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿ ಕೇಂದ್ರ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರ ಬಳಿಕ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ರಾಮನಗರವನ್ನು ರೇಷ್ಮೆ ನಗರಿ ಎಂದು ಇಂದು ಕೂಡ ಕರೆಯಲಾಗುತ್ತದೆ. ರಾಮನಗರ ತಾಲ್ಲೂಕಿನ ವಿಸ್ತೀರ್ಣ 629 ಚ.ಕಿ.ಮೀ ಹೊಂದಿದೆ.

ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನೂತನ ತಾಲೂಕು ಕೇಂದ್ರವಾಗಿ ಕನಕಪುರ ತಾಲೂಕಿನ ಹಾರೋಹಳ್ಳಿ, ಕೋಡಿಹಳ್ಳಿ, ಮತ್ತು ಕುಣಿಗಲ್ ತಾಲ್ಲೂಕ್ಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ, ಮತ್ತು ತಾಲ್ಲೂಕಿನ ಹುಲಿಯೂರು ದುರ್ಗ ವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಕೊಳ್ಳಲಾಗಿದೆ.

ರಾಮನಗರ ಜಿಲ್ಲೆಯು ವಿಶೇಷವಾಗಿ ಜಾನಪದ ಕಲೆಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಕಲೆಗಳು ಅನಾವರಣಗೊಂಡಿವೆ. ಅದಕ್ಕಾಗಿಯೇ ವಿಶೇಷವಾಗಿ ಜಾನಪದ ಲೋಕವನ್ನು ಕಾಣಬಹುದು. ಜಾನಪದ ಕಲೆಗಳ ಸಂಗ್ರಹ ಇಲ್ಲಿದೆ. ಜಾನಪದ ಗಾಯನದಲ್ಲಿ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದಾರೆ. ಅನೇಕ ಹಳ್ಳಿಗಳಲ್ಲಿ ತಾಸು ಗಟ್ಟಲೆಯಲ್ಲದೆ, ದಿನಗಟ್ಟಲೆ ವಿವಿಧ ಕೆಲಸ ಕಾರ್ಯಗಳು, ಸಂಪ್ರದಾಯ ಆಚರಣೆಯ ಜಾನಪದ ವಿವಿಧ ಪ್ರಕಾರದ ಗೀತೆಗಳನ್ನು ಹಾಡುವ ಹಿರಿಯ ತಲೆಗಳು ಜಿಲ್ಲೆಯಲ್ಲಿವೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಹೇಳಲಾಗಿದೆ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ.


ರಾಮನಗರ ಗ್ರೀನ್ ಝೋನ್ ನಿಂದ ರೆಡ್ ಝೋನ್ ಗೆ ಬದಲಾಗಿದೆ. ಇದೀಗ ರಾಮನಗರ ಕೊರೊನಾ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ನಗರಸಭೆ ಪೌರಾಯುಕ್ತೆ ಶುಭಾ ಅವರನ್ನು ಸರ್ಕಾರ ನೇಮಕ ಮಾಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಪದ್ಮಿನಿದೇವಿ ಪೌರಾಯುಕ್ತೆ ಶುಭಾರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ತರುವುದು ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಯನ್ನು ನೇಮಕ ಮಾಡಿದ್ದು, ಕೋವಿಡ್-19 ಪ್ರಕ್ರಿಯೆ ಮುಕ್ತಾಯಗೊಳ್ಳುವರೆಗೆ ಶುಭಾ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಸರ್ಕಾರ ಆದೇಶ ಮಾಡಿದೆ.

ಜೈಲಿನ ಸುತ್ತಲಿನ ಒಂದು ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿರುವ ಪೂರ್ವಕ್ಕೆ ಮೈಸೂರು ರೈಲ್ವೆ ಟ್ರ್ಯಾಕ್, ಪಶ್ಚಿಮಕ್ಕೆ ಬೆಂಗಳೂರು ಮೈಸೂರು ಹೆದ್ದಾರಿ, ಉತ್ತರಕ್ಕೆ ಜೈಲು ಅಧೀಕ್ಷಕರ ವಸತಿಗೃಹ ಹಾಗೂ ದಕ್ಷಿಣಕ್ಕೆ ಜಿಲ್ಲಾ ಪೊಲೀಸ್ ಭವನದ ಒಳಗಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಜೈಲಿನ ಸುತ್ತ 5 ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳಾದ ಪೂರ್ವಕ್ಕೆ ಮಾಯಾಗಾನಹಳ್ಳಿ, ಪಶ್ಚಿಮಕ್ಕೆ ಜಾನಪದಲೋಕ, ಉತ್ತರಕ್ಕೆ ಹರಿಸಂದ್ರ ಹಾಗೂ ದಕ್ಷಿಣಕ್ಕೆ ಅಂಜನಾಪುರ ಗ್ರಾಮಗಳ ವ್ಯಾಪ್ತಿಯನ್ನು ಕೊರೊನಾ ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.