ಮಹಾಮಾರಿ ಕರೊನಾ ವೈರಸ್, ಸಾವಿನ ದವಡೆಯಿಂದ ರೋಗಿಗಳನ್ನು ಪಾರು ಮಾಡುವ ವೈದ್ಯರನ್ನೂ ಬಿಟ್ಟಿಲ್ಲ. ಅನೇಕ ವೈದ್ಯರಿಗೆ ಕರೊನಾ ಪಾಸಿಟಿವ್ ಬಂದಿರುವ ಸಾಕಷ್ಟು ಪ್ರಕರಣಗಳನ್ನು ನೋಡಿದ್ದೇವೆ. ಈ ಹೆಮ್ಮಾರಿಗೆ ವೈದ್ಯರು ಕೂಡ ಕೆಲವೆಡೆ ಬಲಿಯಾಗಿರುವುದನ್ನು ಕೇಳಿದ್ದೇವೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Us ಬಟನ್ ಕ್ಲಿಕ್ ಮಾಡಿ
ಇವೆಲ್ಲದರ ನಡುವೆ ಮಹಿಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಪುಣೆಯ ವೈದ್ಯೆ ಮೇಘಾ ವ್ಯಾಸ್ ಅವರು ಕರೊನಾ ರೋಗಿಗೆ ಚಿಕಿತ್ಸೆ ನೀಡುವಾಗ ಸೋಂಕು ತಗುಲಿ ಸಾವಿಗೀಡಾಗಿದ್ದಾರೆ ಎಂದು ಬರೆದು ಫೋಟೋವನ್ನು ಹರಿಬಿಟ್ಟಿದ್ದಾರೆ.

ಆದರೆ, ಇದು ಎಷ್ಟು ಸತ್ಯ ಎಂದು ಪರೀಕ್ಷಿಸಲು ಮುಂದಾದಾಗ, ವೈರಲ್ ಫೋಟೋದಲ್ಲಿರುವ ಮಹಿಳೆ ವೈದ್ಯೆಯಲ್ಲ. ಅವರು ಕರೊನಾದಿಂದಲ್ಲೂ ಸಾವಿಗೀಡಾಗಿಲ್ಲ, ಬದಲಾಗಿ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆಂದು ಇಂಡಿಯಾ ಟುಡೆ ಆ್ಯಂಟಿ ಫೇಕ್ನ್ಯೂಸ್ ವಾರ್ ರೂಮ್ಗೆ ತಿಳಿದುಬಂದಿದೆ.
ಮತ್ತೊಬ್ಬ ಕೋವಿಡ್ ವಾರಿಯರ್ ಪುಣೆಯ ಡಾ. ಮೇಘಾ ವ್ಯಾಸ್ ಅವರು ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರಿಗೆ ದೇವರು ಸದ್ಗತಿ ಕರುಣಿಸಲಿ ಎಂದು ಬರೆದು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ.