ಮೊಬೈಲ್ ನೋಡ್ಕೊಂಡು ವಾಕಿಂಗ್ ಹೋಗಿ ಕಾಡಾನೆಗೆ ಡಿಕ್ಕಿ ಹೊಡೆದ ; ಸೊಂಡಿಲಿಂದ ಎತ್ತಿ ಎಸೆದ ಆನೆ!

ಮೊಬೈಲ್ ನೋಡಿಕೊಂಡು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತಿದ್ದ ಕಾಡಾನೆಗೆ ಡಿಕ್ಕಿ ಹೊಡೆದ ನಂತರ ಆನೆ ತುಳಿದರೂ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಬದುಕುಳಿದ್ದಾರೆ. ಗೋಣಿಕೊಪ್ಪಲು ಬಳಿಯ ಮೈಸೂರು ಹೆದ್ದಾರಿ ಚೆನ್ನಂಗೊಲ್ಲಿ ಹತ್ತಿರ ಈ ಘಟನೆ ನಡೆದಿದೆ. ಇಲ್ಲಿನ ಬಾಳಾಜಿ ಗ್ರಾಮದ ಸುರೇಶ್ ಬಾಬು (46) ಆನೆ ದಾಳಿಯಿಂದ ಪಾರಾಗಿದ್ದಾರೆ. ಆನೆ ತುಳಿತದಿಂದ ಇವರ ಪ್ಯಾಂಟ್ ಮೇಲೆ ಕೆಸರು ಮಿಶ್ರಿತ ಆನೆಯ ಹೆಜ್ಜೆ ಗುರುತು ಮಾತ್ರ ಮೂಡಿದೆ. 

ಕಾಡಾನೆಯೊಂದು ರಸ್ತೆ ಮಧ್ಯೆ ನಿಂತಿತ್ತು. ಮಂಗಳವಾರ ಮುಂಜಾನೆ ಪಟ್ಟಣದತ್ತ ವಾಕಿಂಗ್ ಬರುತ್ತಿದ್ದ ಸಂದರ್ಭದಲ್ಲಿ ಮೊಬೈಲ್‌ ನೋಡಿಕೊಂಡು ಬಂದಿದ್ದಾರೆ. ಆನೆಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಆನೆ ಇವರನ್ನು ಸೊಂಡಿಲಿನಿಂದ ಎಸೆದು ತುಳಿದಿದೆ. ನಂತರ ಆನೆಯು ಹೆದ್ದಾರಿ ದಾಟಿ ತೋಟದಲ್ಲಿ ಮರೆಯಾಗಿದೆ. ಆನೆಯ ದಂತ ಸಾಕಷ್ಟು ಉದ್ದ ಇತ್ತು ಎನ್ನುವುದಷ್ಟನ್ನೇ ಗಮನಿಸಿದೆ ಎಂದು ಅದೃಷ್ಟವಂತ ಸುರೇಶ್ ಬಾಬು ಹೇಳಿದ್ದಾರೆ.

Comments