ಆಗ್ರಾ: ಕೊರೋನಾ ವೈರಸ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ವಿಫಲಗೊಂಡಿದ್ದ ಆಗ್ರಾದ ಸ್ಥಳೀಯ ಆಡಳಿತದ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇಸತ್ತ ಮೇಯರ್ ನವೀನ್ ಜೈನ್ ತಾಜ್ ನಗರವನ್ನು ಮತ್ತೊಂದು ವುಹಾನ್ ಆಗುವುದರಿಂದ ತಪ್ಪಿಸಬೇಕೆಂದು ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದರು.
ಇತ್ತೀಚಿನ ಮಾಹಿತಿಯ ಪ್ರಕಾರ ಮೇಯರ್ ಪತ್ರ ಬರೆದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದ್ದು, ಗಣನೀಯ ಪ್ರಮಾಣದ ಸುಧಾರಣೆಗಳು ಕಂಡುಬಂದಿದ್ದು, ಕೋವಿಡ್-19 ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ.
ಕೋವಿಡ್-19 ಸೋಂಕಿತರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು, ಮಾನವ ಹಕ್ಕುಗಳ ಉಲ್ಲಂಘನೆಯಾಗಿ, ವೈದ್ಯಕೀಯ ಸೌಲಭ್ಯ, ಆಹಾರ ಪೂರೈಕೆ ಸಮರ್ಪಕವಾಗಿ ಲಭ್ಯವಾಗದೇ ಇರುವುದೇ ಮೊದಲಾದ ಸಮಸ್ಯೆಗಳಿದ್ದವು. ಈ ಬಗ್ಗೆ ಆಗ್ರಾ ಮೇಯರ್ ಯೋಗಿ ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಸ್ಥಳೀಯ ಸಂಸದ ಎಸ್ ಪಿ ಸಿಂಗ್ ಬಘೇಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿದ್ದು, ಜನರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Us ಬಟನ್ ಕ್ಲಿಕ್ ಮಾಡಿ